ನಾಳೆಯಿಂದ (ಡಿ.೧) ರಿಂದ ಅಂಗನವಾಡಿ ಕಾರ್ಮಿಕರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಪ್ರತಿಭಟನೆ

admin
ಸಾಂದರ್ಭಿಕ ಚಿತ್ರ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಮಿಕರ ಸಂಘವು ಡಿಸೆಂಬರ್ 1, 2025 ರಿಂದ ಅನಿಶ್ಚಿತಾವಧಿ ಪ್ರತಿಭಟನೆ ಆರಂಭಿಸುವುದಾಗಿ ಘೋಷಿಸಿದ್ದು, ರಾಜ್ಯದ ಮಹಿಳಾ ಹಾಗೂ ಮಕ್ಕಳ ಪೋಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಫ್ರೀಡಂ ಪಾರ್ಕ್ ನಲ್ಲಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ನೌಕರರು ಅನಿರ್ದಿಷ್ಟ ಅವಧಿ ಹೋರಾಟಕ್ಕೆ ಮುಂದಾಗಿದ್ದಾರೆ. ಸಂಘದ ಪ್ರಮುಖರ ಪ್ರಕಾರ, ಹಲವು ಬಾರಿ ಭರವಸೆ ದೊರೆತಿದ್ದರೂ ವೇತನ ಹೆಚ್ಚಳ, ಭದ್ರತೆ, ಶಾಶ್ವತೀಕರಣ, ಗೌರವಧನ ವಿಚಾರದಲ್ಲಿ ಯಾವುದೇ ಸ್ಪಷ್ಟ ಪರಿಹಾರ ಕಂಡುಬಂದಿಲ್ಲ. ಆಹಾರ, ಆರೋಗ್ಯ ಮತ್ತು ಶಿಕ್ಷಣದ ಉದ್ದೇಶಗಳನಿಟ್ಟುಕೊಂಡು ಅಂಗನವಾಡಿ ಕೇಂದ್ರಗಳು, ಬಿಸಿಯೂಟ ಮತ್ತು ಆಶಾ ಯೋಜನೆ ಪ್ರಾರಂಭಗೊಂಡು ಹಲವು ದಶಕಗಳಾಗಿವೆ. ಆದರೆ ಇದುವರೆಗೂ ಈ ಯೋಜನೆಗಳನ್ನು ಖಾಯಂ ಮಾಡದೇ ಸುಮಾರು ೫೯ ಲಕ್ಷ ಮಹಿಳೆಯರನ್ನು ನಿರಂತರವಾಗಿ ಶೋಷಣೆ ಮಾಡುತ್ತಲೇ ಇದ್ದಾರೆ. ಎನ್ ಡಿ ಎ ನೇತೃತ್ವದ ಸರ್ಕಾರ ತನ್ನ ಪಾಲಿನ ವಂತಿಗೆಯನ್ನು ೯೦% ರಿಂದ ೬೦% ಗೆ ಇಳಿಸಿದೆ. ಬೆಲೆಯೇರಿಕೆ ಆಧಾರದಲ್ಲಿ ಬಜೆಟ್ ಅನ್ನು ಹೆಚ್ಚಿಸುತ್ತಿಲ್ಲ. ಬದಲಿಗೆ ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಗಳ, ಬಿಸಿಯೂಟ ವ್ಯವಸ್ಥೆಯ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಾನೇ ಘೋಷಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಾರಿ ನಮ್ಮ ಬೇಡಿಕೆಗಳು ನೈಜವಾಗಿ ಪೂರ್ಣಗೊಳ್ಳುವವರೆಗೆ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆಯ ಪ್ರಮುಖ ಬೇಡಿಕೆಗಳು:

  • ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಾನ್ಯ ವೇತನ ಹಾಗೂ ಗೌರವಧನ
  • ದೀರ್ಘಕಾಲದ ಸೇವೆಗೆ ಶಾಶ್ವತ ಹುದ್ದೆ
  • ಕೆಲಸಕ್ಕೆ ತಕ್ಕ ಸೌಲಭ್ಯಗಳು ಮತ್ತು ಸುರಕ್ಷತೆ
Share This Article
Leave a Comment

Leave a Reply

Your email address will not be published. Required fields are marked *