ಉಳಿಯಾರಗೋಳಿ–ಕೋತಲಕಟ್ಟೆ ಬಳಿ ಡೆಕೋರೇಷನ್ ಸಾಮಾಗ್ರಿ ಕೊಂಡೊಯ್ಯುತ್ತಿದ್ದ ಟೆಂಪೋ ಪಲ್ಟಿಯಾಗಿ ಐವರು ಮೃತಪಟ್ಟ ಭೀಕರ ಅಪಘಾತ. ಏಳು ಮಂದಿ ಗಾಯಗೊಂಡಿದ್ದು, ಒರ್ವನ ಸ್ಥಿತಿ ಗಂಭೀರವಾಗಿದೆ.
ಟೆಂಪೋ ಚಾಲಕ ಎದುರಿನ ವಾಹನದ ಅಕಸ್ಮಾತ್ ಬ್ರೇಕ್ ತಪ್ಪಿಸಲು ಎಡಕ್ಕೆ ತಿರುಗಿದ ವೇಳೆ ನಿಯಂತ್ರಣ ತಪ್ಪಿ ವಾಹನ ಡಿವೈಡರ್ ಮೇಲೆ ಮಗುಚಿ ಸರ್ವೀಸ್ ರಸ್ತೆಗೆ ಉರುಳಿದ್ದು ದುರಂತಕ್ಕೆ ಕಾರಣವಾಗಿದೆ.
ಸ್ಥಳದಲ್ಲೇ ಇಬ್ಬರು ಮೃತರು; ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಹಾಗೂ ಮತ್ತೋರ್ವ ಚಿಕಿತ್ಸೆ ವೇಳೆ ಮೃತಪಟ್ಟರು.
ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಕಾಪು ಎಸ್ಐ ತೇಜಸ್ವಿ ಅವರು ತಂಡದೊಂದಿಗೆ ಸ್ಥಳಕ್ಕಾಗಮಿಸಿ ಸಂಚಾರ ನಿಯಂತ್ರಿಸಿದ್ದಾರೆ.
ಕಮಲ್, ಸಮರೇಶ್ (ಪ. ಬಂಗಾಳ), ಪಪ್ಪು ರವಿದಾಸ್, ಹರೀಶ್ (ಅಸ್ಸಾಂ), ಗಪುನಾಥ್ (ತ್ರಿಪುರಾ) ಮೃತಪಟ್ಟಿದ್ದು ರಂಜಿತ್, ಪ್ರಭಾಸ್ ರಾಯ್, ಸೂರಜ್, ಸುಬ್ರತ್, ಗಣೇಶ್, ಗೋಪಾಲ್ ಮತ್ತೋರ್ವ ಗಾಯಗೊಂಡಿದ್ದಾನೆ.
ಪೋಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿದ್ದು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


