ಮುಲ್ಕಿ: ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆಯ ಇಪ್ಪತ್ತನೇ ವಾರ್ಷಿಕೋತ್ಸವ ಮತ್ತು ಪ್ರಮಾಣ ಪತ್ರ ವಿತರಣಾ ಸಮಾರಂಭ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪ್ರಥಮ್ ಭಟ್, ಗಣೇಶ್ ಆಚಾರ್ಯ, ಶ್ರೀನಿವಾಸ್ ಭಟ್, ಅಮರನಾಥ ಭಟ್, ಪುರುಷೋತ್ತಮ ಭಟ್ ರವರಿಗೆ ಶಿಕ್ಷಣ ಪ್ರಮಾಣಪತ್ರ ವಿತರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗುರುವಂದನೆ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಂಭವಿ ನರಸಿಂಹ ಕುಡ್ವಾ ಹಾಗೂ ಕಿನ್ನಿಗೋಳಿ ಗಣೇಶ್ ಮಲ್ಯ ಸ್ಮಾರಕ ದತ್ತಿ ಪ್ರಶಸ್ತಿಗಳನ್ನು ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣನ ಬಾಲಲೀಲೆಗಳನ್ನು ನಿರೂಪಿಸುವ ಬಾಲಚರಿತಂ ಸಂಸ್ಕೃತ ನಾಟಕ ನಡೆಯಿತು.
ಕಿನ್ನಿಗೋಳಿ ಶ್ರೀ ರಾಮಮಂದಿರದ ಮುಖ್ಯ ಅರ್ಚಕರಾದ ವೇದಮೂರ್ತಿ ಗಿರೀಶ್ ಭಟ್ ಮಾತನಾಡಿ, ಪುರೋಹಿತರು ವಿದ್ಯಾ ಸಂಪನ್ನತೆಯ ಮೂಲಕ ಕಲ್ಪವೃಕ್ಷದಂತೆ ಜನರಿಗೆ ಹಿತ ವ್ಯಕ್ತಿಗಳಾಗಿ ಬೆಳೆದು ವಿದ್ಯಾದಾನದ ಮೂಲಕ ಸಮಾಜದಲ್ಲಿ ಆದರ್ಶಪ್ರಾಯರಾಗಬೇಕು ಎಂದು ಹೇಳಿದರು.
ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಅಧ್ಯಕ್ಷತೆಯನ್ನು ವಹಿಸಿದ್ದರು. ಪಾಠ ಶಾಲೆಯ ಮಹಾ ಪೋಷಕರಾದ ವಿಶ್ವನಾಥ ಎನ್.ಶೆಣೈ ಮುಂಬೈ ಮತ್ತು ಸುನಿತಾ ವಿಶ್ವನಾಥ ಶೆಣೈ, ಶಿಕ್ಷಕರಾದ ನವೀನ್ ಜನಾರ್ದನ ಭಟ್ ಮತ್ತು ನಾರಾಯಣ ಶರ್ಮ ಕಾರ್ಕಳ, ಆಡಳಿತ ಮಂಡಳಿ ಸದಸ್ಯರಾದ ಯು.ಜಯರಾಮ ಶೆಣೈ, ಎಂ.ಪಾAಡುರAಗ ಭಟ್, ವಿ.ಹರಿ ಕಾಮತ್ ಉಪಸ್ಥಿತರಿದ್ದರು.
ಅನಂತ ಪ್ರಸಾದ್ ಭಟ್ ಸ್ವಾಗತಿಸಿದರು, ಪಾಂಡುರAಗ ಭಟ್ ಅತಿಥಿಯನ್ನು ಪರಿಚಯಿಸಿದರು. ಪ್ರಥಮ ಭಟ್ ನಿರೂಪಿಸಿದರು. ಅನಂತ ಪ್ರಸಾದ್ ಭಟ್ ವಂದಿಸಿದರು.
ಮುಲ್ಕಿ ಶ್ರೀ ವ್ಯಾಸಮಹರ್ಷಿ ವೇದಪಾಠ ಶಾಲೆ: ಸ್ಮಾರಕ ದತ್ತಿ ಪ್ರಶಸ್ತಿ

Leave a Comment

