ಮೊಗವೀರ ಸಮುದಾಯದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಉಡುಪಿ ಮತ್ತು ದ. ಕ ಮೊಗವೀರ ಮಹಿಳಾ ಮಹಾಜನ ಸಂಘದ ಅಧ್ಯಕ್ಷೆಯಾಗಿ ಕವಿತಾ ಶರತ್ ಮಿತ್ರಪಟ್ಣ ಆಯ್ಕೆಯಾಗಿದ್ದು ಮುಂದಿನ ಮೂರು ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.
ಭಾನುವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿರುವ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕವಿತಾ ರವರನ್ನು ವಿವಿಧ ಮೊಗವೀರ ಮಹಿಳಾ ಸಭೆಗಳ ಪ್ರತಿನಿಧಿಗಳು ಹಾಗೂ ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳ ಸಮ್ಮುಖ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭ ಸಂಘದ ಆಡಳಿತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸುನಿತಾ ಜೆ ಬಂಗೇರ ಉಚ್ಚಿಲ ಹಾಗೂ ಶಾಂಭವಿ ಮೂಳೂರು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಪೂರ್ಣಿಮಾ ಚಂದ್ರಶೇಖರ್ ಕೈಪುಂಜಾಲು ಹಾಗೂ ಜತೆ ಕಾರ್ಯದರ್ಶಿ ಸ್ಥಾನಕ್ಕೆ ಶುಭಾ ದಿನೇಶ್ ಗುಂಡಿ ಆಯ್ಕೆಗೊಂಡರು. ಕೋಶಾಧಿಕಾರಿಯಾಗಿ ಆರತಿ ಮನೋಜ್ ಕಾಂಚನ್ ಎರ್ಮಾಳ್ ಬಡಾ, ಜತೆ ಕೋಶಾಧಿಕಾರಿಯಾಗಿ ಭಾರತಿ ಕೇಶವ್ ಶ್ರೀಯಾನ್ ಮಟ್ಟು ಜವಾಬ್ದಾರಿ ನಿರ್ವಹಿಸಿಲಿದ್ದಾರೆ.
ಮೊಗವೀರ ಸಮುದಾಯದ ಮಹಿಳಾ ಮತ್ತು ಯುವಜನ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಉಡುಪಿ ದ. ಕ ಮೊಗವೀರ ಮಹಿಳಾ ಮಹಾಜನ ಸಂಘವು ಹಲವಾರು ಚಟುವಟಿಕೆ ಮತ್ತು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಮುದಾಯದ ಎಲ್ಲಾ ಮಹಿಳಾ ಗ್ರಾಮಸಭೆಗಳ ಒಕ್ಕೂಟದಿಂದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಅಭಿವೃದ್ಧಿಗೆ ಈ ಸಂಸ್ಥೆ ಪೂರ್ಣರೀತಿಯಲ್ಲಿ ಶ್ರಮವಹಿಸುತ್ತಿದ್ದು ಸಮುದಾಯದ ಸಮಗ್ರ ಅಭಿವೃದ್ಧಿಗೆ ಕಾರ್ಯತತ್ಪರವಾಗಿದೆ.
ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ. ಸಿ ಕೋಟ್ಯಾನ್ , ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ ಉಪಸ್ಥಿತರಿದ್ದರು. ಸಂಘದ ಗೌರವ ಸಲೆಹೆಗಾರರು, ಮೊಗವೀರ ಮುಂದಾಳು ನಾಡೋಜ ಡಾ. ಜಿ. ಶಂಕರ್ ಸಭೆಗೆ ಆಗಮಿಸಿ ನೂತನ ಸಮಿತಿಗೆ ಶುಭ ಹಾರೈಸಿದರು.


