ಪಡುಬಿದ್ರಿಯ ಜೀವನ್ ಸೇವಾ ಬ್ರಿಗೇಡ್ ನಿಂದ ದೇವಸದೃಶ ಸೇವೆ

ಕಿಡ್ನಿ ಸಮಸ್ಯೆ ರೋಗಿಗಳಿಗೆ ನಿರಂತರ ಸಹಾಯಯಾಸ್ತ

admin

ಪಡುಬಿದ್ರಿ: ಕಿಡ್ನಿ ವೈಫಲ್ಯದಂತಹ ಮಾರಣಾಂತಿಕ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಆಶಾಕಿರಣವೆಂಬಂತೆ ಪಡುಬಿದ್ರಿಯ ಪುಟ್ಟ ಸಂಸ್ಥೆಯೊಂದು ಅಗಾಧವಾದ ಸೇವಾ ಕೆಲಸ ಮಾಡುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ ಮಾನವೀಯ ನೆಲೆಯನ್ನು ಸೃಷ್ಟಿ ಮಾಡುತ್ತಿದೆ.

೩ ವರುಷಗಳ ಹಿಂದೆ ಆರಂಭಗೊಂಡಿರುವ ಜೀವನ್ ಸೇವಾ ಬ್ರಿಗೇಡ್ ಸಂಸ್ಥೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿರಂತರವಾಗಿ ಸಹಾಯಹಸ್ತ ಸೇರಿದಂತೆ ವಿವಿಧ ರೀತಿಯ ಸಹಾಯ ಸೇವೆಗಳನ್ನು ಮಾಡುತ್ತಿದ್ದು, ಶುಕ್ರವಾರ ಮತ್ತಷ್ಟು ಫಲಾನುಭವಿಗಳಿಗೆ ಸಹಾಯಹಸ್ತ ವಿತರಣೆ ನೀಡಿತು.

ಮೊಗವೀರ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ವಿಜಯ ಕೆ. ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆ ನಡೆಸುತ್ತಿರುವ ನಿಸ್ವಾರ್ಥ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯು ಈ ಪುಣ್ಯ ಕಾರ್ಯವನ್ನು ಮತ್ತಷ್ಟು ವಿಸ್ತರಿಸಿ ಕೆಲಸ ಮಾಡಬೆಂದು ಉತ್ತೇಜನ ನೀಡಿದರು.

ಸಸಿಹಿತ್ಲು ಕದಿಕೆ ಮೊಗವೀರ ಸಭಾ ಅಧ್ಯಕ್ಷ ಗಿರೀಶ್ ಕುಮಾರ್ ಶ್ರೀಯಾನ್, ಶಾಯನ್ ರಿಚರ್ಡ್ ಕೈಪುಂಜಾಲು, ಸಂತೋಷ್ ಶ್ರೀಯಾನ್ ಕೈಪುಂಜಾಲು, ಶಶಿಕಾಂತ್ ಪಡುಬಿದ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಿಡ್ನಿ ಸಮಸ್ಯೆಯಿಂದ ಹಲವಾರು ವರುಷ ಬಳಲಿ ಜೀವನದಲ್ಲಿ ಹೋರಾಟಕ್ಕೆ ಮಾದರಿಯಂತೆ ಬದುಕಿದ್ದ ದಿ. ಜೀವನ್ ಅವರ ಸ್ಮರಣಾರ್ಥ ಪ್ರಾರಂಭಗೊಂಡ ಕಾಡಿಪಟ್ಟ ಜೀವನ್ ಸೇವಾ ಬ್ರಿಗೇಡ್ ವತಿಯಿಂದ ಈ ಸಂದರ್ಭ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವಿಭಜಿತ ದ.ಕ. ಜಿಲ್ಲಾ ವ್ಯಾಪ್ತಿಯ 8 ಮಂದಿ ಫಲಾನುಭವಿಗಳಿಗೆ ಸಹಾಯಹಸ್ತ ನೀಡಲಾಯಿತು. ಪ್ರಥಮ ವರ್ಷ 2 ಮಂದಿಗೆ, ಕಳೆದ ವರ್ಷ 6 ಮಂದಿಗೆ ಸಹಾಯಹಸ್ತ ನೀಡ ಲಾಗಿದ್ದು, ಮುಂದಿನ ವರ್ಷ 10 ಮಂದಿ ಫಲಾನುಭವಿಗಳಿಗೆ ಸಹಾಯಹಸ್ತ ನೀಡಲು ನಿರ್ಧರಿಸಲಾಗಿದೆ. ಈ ಬಾರಿ 1.20 ಲಕ್ಷ ರೂ. ಸಹಾಯಧನ ವಿತರಿಸಲಾಯಿತು.

ಶಯನ್ ರಿಚರ್ಡ್ ಕೈಪುಂಜಾಲು, ಸಂತೋಷ್ ಶ್ರೀಯಾನ್ ಕೈಪುಂಜಾಲು ಇನ್ನಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಕಿಶೋ‌ರ್ ಕಾಂಚನ್ ಸ್ವಾಗತಿಸಿದರು. ಸಹನಾ ಆರ್. ಮೆಂಡನ್ ಕಾರ್ಯಕ್ರಮ ನಿರ್ವಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *